ವಿಜಯನಗರ..ವಿಶ್ವ ವಿಖ್ಯಾತ ಹಂಪಿಯಲ್ಲಿ ಮೂಲಭೂತ ಸೌಕರ್ಯಗಳ ಹೆಚ್ಚಿಸುವ ಪ್ರಯತ್ನವನ್ನ ಇಲ್ಲಿರುವ ಯಾವೊಬ್ಬ ಜನಪ್ರತಿನಿಧಿಯೂ ಮಾಡದೆ ಇರುವುದು ದುರದೃಷ್ಟಕರ ಸಂಗತಿ. ಹಾಗಾಗಿ ಹಂಪೆಯ ಕೆಲವು ಸ್ಥಳಗಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ಎದುರಾಗಿದೆ.
ಇಲ್ಲಿಗೆ ಬೇಟಿಕೊಡುವ ಪ್ರವಾಸಿಗರು ಸಂಭಂದಪಟ್ಟ ಅಧಿಕಾರಿಗಳಿಗೆ ಹಾಗೂ ಇಲಾಖೆಗೆ ಶಾಪಗಳ ಸುರಿಮಳೆಯನ್ನೇ ಸುರಿಸುತಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಏನೆಲ್ಲ ಯೋಜನೆಗಳನ್ನ ಇಲ್ಲಿ ಪ್ರಾರಂಬಿಸಲಾಗುತ್ತದೆಯೊ ಆ ಎಲ್ಲಾ ಯೋಜನೆಗಳು ನಿರ್ವಹಣೆ ಇಲ್ಲದೆ ಬೆರಳೆಣಿಕೆ ದಿನಗಳಲ್ಲೆ ನೆಲಕಚ್ಚಿ ಬಿಡುತ್ತವೆ. ಉದಾಹರಣೆ ಎಂದ್ರೆ ಕಳೆದ ಕೆಲವು ವರ್ಷಗಳ ಹಿಂದೆ ಕೋಟಿ ಕೋಟಿ ಹಣ ಕರ್ಚುಮಾಡಿ ಸೌಚಾಲಯಗಳನ್ನ ಪ್ರಾರಂಬಿಸಲಾಯಿತು, ಆದರೆ ಅವುಗಳು ನಿರ್ವಹಣೆ ಇಲ್ಲದೆ ಹಾಳಾಗಿ ಮೂಲೆ ಸೇರಿದವು, ಇನ್ನು ಕುಡಿಯುವ ನೀರಿಗಂತೂ ಇಲ್ಲಿರುವ ಬರ ಎಲ್ಲಿಯೂ ಕಾಣ ಸಿಗುವುದಿಲ್ಲ.
ತುಂಗಭದ್ರ ನದಿ ದಡದಲ್ಲಿರುವ ಹಂಪಿಗೆ ಬರುವ ಪ್ರವಾಸಿಗರು ಹನಿ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿಬಿಡುತ್ತೆ. ಇನ್ನು ಹಂಪಿಯ ವಿಜಯವಿಠ್ಠಲ ದೇವಸ್ಥಾನದ ಬಳಿಯಲ್ಲಿ ಪರಿಸರ ಕಾಪಾಡುವ ದೃಷ್ಠಿಯಲ್ಲಿ ಪ್ರವಾಸಿಗರ ವಾಹನಗಳಿಗೆ ಪ್ರವೇಶ ನೀಡದೆ ತನ್ನದೆ ಆದ ಬ್ಯಾಟರಿ ಚಾಲಿತ ವಾಹನ ಸಂಚಾರ ಪ್ರಾರಂಬಿಸಿತು ಇಲ್ಲಿನ ಹಂಪಿ ಅಭಿವೃದ್ದಿ ಪ್ರಾಧಿಕಾರ, ಆದರೆ ಪ್ರಾರಂಬಿಸಿದ ಬ್ಯಾಟರಿ ಚಾಲಿತ ಬಘೀಸ್ ಗಳು ಆಗಾಗ ಕೈಕೊಟ್ಟು ಮೂಲೆ ಸರುವ ಮೂಲಕ ಇಲ್ಲಿಗೆ ಬರುವ ಪ್ರವಾಸಿಗರು ಕಾದು ಕಾದು ಸುಸ್ತಾಗಿ ಕೊನೆಗೆ ಎರಡು ಕಿಲೊಮೀಟರ್ ನಡೆಯಲೇಬೇಕಾಗಿದೆ.
ಈ ಎಲ್ಲಾ ಸಮಸ್ಯಗಳಿಗೆ ಪರಿಹಾರ ಕೊಡಬೇಕಾದ ಸಚಿವರು ಪಕ್ಕದ ಹೊಸಪೇಟೆ ನಗರದಲ್ಲಿ ಇದ್ದರೂ ಅವರ ಕಣ್ಣಿಗೆ ಕಾಣುತ್ತಿಲ್ಲ ಎಂದು ಜನ ಸಾಮಾನ್ಯರು ಕೇಳುತಿದ್ದಾರೆ. ಇನ್ನು ಸಚಿವ ಶ್ರೀ ರಾಮುಲು ಅವರು ಇತ್ತೀಚೆಗೆ ಇಲ್ಲಿರುವ ಕೋದಂಡರಾಮಸ್ವಾಮಿ ಹಾಗೂ ಅಕ್ಕ ಪಕ್ಕದ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯವನ್ನ ತಮ್ಮ ಸ್ವಂತ ಹಣದಿಂದ ಕೈಗೊಂಡಿದ್ದಾರೆ, ಆದರೆ ಈ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಕೊಡಬೇಕಾಗಿರುವ ಮೂಲಸೌಕರ್ಯಗಳನ್ನ ಮಾತ್ರ ಮರೆತುಬಿಟ್ಟಿದ್ದಾರೆ. ಜನರ ಸೇವೆಯೇ ಜನಾರ್ಧನನ ಸೇವೆ ಎಂದು ಅಧಿಕಾರ ಹಿಡಿವ ನಮ್ಮ ಜನ ಪ್ರತಿನಿಧಿಗಳು, ಅಧಿಕಾರಕ್ಕೆ ಬಂದಮೇಲೆ ಅಧಿಕಾರ ಕೊಟ್ಟ ಜನಗಳನ್ನೇ ಮರೆತು ಜನಾರ್ಧನನ ಜೀರ್ಣೋದ್ದಾರಕ್ಕೆ ಕೈಹಾಕುತ್ತಾರೆ.
ಹಾಗಾಗಿ ಹಂಪಿಯಲ್ಲಿನ ಮೂಲಭೂತ ಸಮಸ್ಯಗಳೇ ಇಲ್ಲಿನ ಜನ ಪ್ರತಿನಿಧಿಗಳ ಗೌರವಕ್ಕೆ ದಕ್ಕೆ ತರುತ್ತಿವೆ, ಸಚಿವರು ಈಗಲಾದ್ರು ಎಚ್ಚೆತ್ತು ಈ ಸಮಸ್ಯಗಳಿಗೆ ಶಾಸ್ವತವಾಗಿ ಪರಿಹಾರ ಕಂಡು ಹಿಡಿಯಬೇಕಿದೆ.
ವರದಿ..ಸುಬಾನಿ ಪಿಂಜಾರ ವಿಜಯನಗರ.