ವಿಜಯನಗರ ..ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯ ಹಿತದೃಷ್ಟಿಯಿಂದ ಹಾಗೂ ಕೋವಿಡ್-19 ರೂಪಾಚಿತರ ಓಮಿಕ್ರಾನ್ ವೈರಸ್ ಹರಡದಂತೆ ಮುನ್ನಚ್ಚರಿಕೆ ಸಲುವಾಗಿ ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಹರಪನಳ್ಳಿ ತಾಲೂಕಿನ ಉಚ್ಚೆಂಗಿದುರ್ಗದ ಉತ್ಸವಾಂಬ ದೇವಿ ದೇವಸ್ಥಾನಕ್ಕೆ ಜ.17ರಂದು ಭಕ್ತಾದಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಮತ್ತು ಹೆಚ್ಚಿನ ಜನಸಂದಣಿ ಸೇರದಂತೆ ನಿಷೇಧಾಜ್ಞೆ ಜಾರಿಗೊಳಿಸಿ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಆದೇಶ ಹೊರಡಿಸಿದ್ದಾರೆ.
ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರ ಪತ್ರ ಆದರಿಸಿ ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಈ ಆದೇಶ ಹೊರಡಿಸಿದ್ದಾರೆ.
ಮೈಲಾರ ಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಜ.17ರಂದು ಹುಣ್ಣಿಮೆ ಪ್ರಯುಕ್ತ ಸುಮಾರು 30ರಿಂದ 40 ಸಾವಿರ ಭಕ್ತಾದಿಗಳು ಬಂದು ದರ್ಶನ ಪಡೆದುಕೊಳ್ಳುವ ಸಂಭವವಿರುತ್ತದೆ. ಅದೇ ರೀತಿ ಹರಪನಳ್ಳಿ ತಾಲೂಕಿನ ಉಚ್ಚೆಂಗಿದುರ್ಗದ ಉತ್ಸವಾಂಬ ದೇವಿ ದೇವಸ್ಥಾನಕ್ಕೂ ಸಹ ಹುಣ್ಣಿಮೆ ದಿನವಾದ ಜ.17ರಂದು ಸುಮಾರು 30ರಿಂದ 40 ಸಾವಿರ ಭಕ್ತಾದಿಗಳು ಬಂದು ದರ್ಶನ ಪಡೆದುಕೊಳ್ಳುವ ಸಂಭವವಿರುತ್ತದೆ.
ಅಲ್ಲದೇ ಭಕ್ತಾದಿಗಳು ಕರ್ನಾಟಕ ರಾಜ್ಯ ಹಾಗೂ ನೆರೆರಾಜ್ಯಗಳಿಂದ ಬರುವ ಸಂಭವವಿದ್ದು,ಈ ಸಮಯದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆಯ ನಿಯಮಗಳನ್ನು ಭಕ್ತಾದಿಗಳು ಅನುಸರಿಸುವುದಿಲ್ಲ, ಕೋವಿಡ್ ರೂಪಾಂತರ ಓಮಿಕ್ರಾನ್ ವೈರಸ್ ಹರಡುವ ಸಂಭವವಿರುವ್ಯದರಿಂದ ದೇವಸ್ಥಾನಕ್ಕೆ ಪ್ರವೇಶಕ್ಕೆ ಭಕ್ತಾದಿಗಳನ್ನು ನಿರ್ಬಂಧಿಸುವುದು ಅವಶ್ಯಕವಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ಮಾದ್ಯಮಕ್ಕೆ ತಿಳಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ.ವಿಜಯನಗರ.
—