You are currently viewing ಬರಡು ಭೂಮಿಯಲ್ಲಿಬಂಗಾರದ ಬೆಳೆ ಬೆಳೆದ ರೈತ.

ಬರಡು ಭೂಮಿಯಲ್ಲಿಬಂಗಾರದ ಬೆಳೆ ಬೆಳೆದ ರೈತ.

  • Post category:Top news

ಮಳೆಯ ಅಭಾವದ ಪ್ರದೇಶಗಳಲ್ಲಿ ಸಾಮಾನ್ಯ ಬೆಳೆ ಬೆಳೆಯುವುದೇ ಕಷ್ಟಸಾಧ್ಯ. ಹೀಗಿರುವಾಗ ಇಲ್ಲೊಬ್ಬ ರೈತ ವಿದೇಶಿ ತಳಿಯ ಡ್ರಾಗನ್ ಫ್ರೂಟ್ ಬೆಳೆದು ಎಲ್ಲರ ಉಬ್ಬೇರುವಂತೆ ಮಾಡಿದ್ದಾನೆ. ಈ ಮೊದಲು ಕುಕ್ಕುಟೋದ್ಯಮದಲ್ಲಿ ತೊಡಗಿಕೊಂಡಿದ್ದ ಈ ರೈತ, ಇದೀಗ ಕ್ರಷಿಯತ್ತ ಮುಖ ಮಾಡಿ ಚೊಚ್ಚಲ ಪ್ರಯತ್ನದಲ್ಲೇ ಭರ್ಜರಿ ಯಶಸ್ಸನ್ನ ಕಂದಿದ್ದಾನೆ.

ಹೌದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯ ರಾಯರಕೆರೆ ಗುಡ್ಡಗಾಡು ಪ್ರದೇಶತ್ತ ಇದೀಗ ಎಲ್ಲರ ಚಿತ್ತ, ಇಲ್ಲಿನ ಎರಡು ಎಕರೆ ಭೂಮಿಯಲ್ಲಿ ವಿದೇಶದ ಡ್ರ್ಯಾಗನ್ ಪ್ರೂಟ್ ಎಲ್ಲರ ಗಮನ ಸೆಳೆಯುತ್ತಿದ್ದು ಬಿ.ಇ. ಪದವೀಧರರಾಗಿರುವ  ರಾಜಶೇಖರ ದ್ರೋಣವಲ್ಲಿ ಎಂಬುವವರು ಈ ಆಧುನಿಕ ಕ್ರಷಿಯ ಆದರ್ಶ ಕ್ರಷಿಕ,

 ದಶಕಗಳಿಂದ ಕುಕ್ಕುಟೋಧ್ಯಮದಲ್ಲಿ ತೊಡಗಿಕೊಂಡಿದ್ದ ಈ ರಾಜಶೇಕರ್ ದಂಪತಿಗಳು ಕಳೆದ ಎರಡು ವರ್ಷದಿಂದ ತೋಟಗಾರಿಕೆ ಕೃಷಿಯತ್ತ ವಾಲಿದ್ದಾರೆ. ಗುಡ್ಡಗಾಡು ಪ್ರದೇಶದ ಮಧ್ಯ ಭಾಗದಲ್ಲೇ ಸುಮಾರು ಎರಡು ಎಕರೆ ಭೂಮಿಯನ್ನು ಖರೀದಿಸಿರುವ ರಾಜಶೇಖರ್ ಈಗ ಆ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ.

2018ರ ಜನವರಿ 26 ರಂದು ಈ ವಿದೇಶಿ ತಳಿ ಡ್ರ್ಯಾಗನ್ ಪ್ರೂಟ್ ಬೆಳೆಯನು ನಾಟಿ ಮಾಡಿದ ರಾಜಶೇಖರ, ಬೆಂಗಳೂರು ಸೇರಿದಂತೆ ಇತರೆಡೆಗಳಲ್ಲಿ ಬಾರಿ ಜೋರಾಗಿ ಮಾರಾಟ ಮಾಡುತ್ತಿದ್ದಾರೆ. ಆರಂಭದಲ್ಲಿ ಅಲ್ಪಸ್ವಲ್ಪ ಮಾತ್ರ ಇಳುವರಿ ಕಂಡಿದ್ದ ಇವರು ಇದೀಗ ವರ್ಷದಲ್ಲಿ ಹತ್ತಾರು ಟನ್ ನಷ್ಟು ಡ್ರ್ಯಾಗನ್ ಪ್ರೂಟ್ ಮಾರಾಟಮಾಡಿದ್ದಾರೆ.

ಈ ತಳಿಯ ಸೀಡ್ಸ್ ತಂದಾಗ, ಎರಡು ವರ್ಷಕ್ಕೆ ಡ್ರ್ಯಾಗನ್ ಹಣ್ಣಿನ ಇಳುವರಿ ಬರುತ್ತದೆಂಬ ಮಾಹಿತಿಯನ್ನು ಆ ಹಣ್ಣಿನ ತಳಿಯ ಮಾರಾಟಗಾರರು ರೈತ ರಾಜಶೇಖರ ಅವರಿಗೆ ತಿಳಿಸಿದ್ದರು. ಆದರೆ ಒಂದೂವರೆ ವರ್ಷಕ್ಕೆ ಈ ಫಸಲು ಕೈಸೇರಲು ಪ್ರಾರಂಭವಾಗಿದೆ.

ಹಾಗಾಗಿ ರಾಜಶೇಖರ ದಂಪತಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.ರಾಜಶೇಖರ್ ಮೂಲತ ಕ್ರಷಿಕರಲ್ಲದೆ ಇದ್ರೂ, ಈ ಬೆಳೆ ಇಷ್ಟೋಂದು ಇಳುವರಿ ಬರಲು ಅಚ್ಚುಕಟ್ಟಾಗಿಯೇ ಕ್ರಷಿಯಲ್ಲಿ ತೊಡಗಿಕೊಂಡಿದ್ದಾರೆ.  ಕಡಿಮೆ ನೀರಿನಲ್ಲಿ ಬೆಳೆಯುವ ಈ ಬೆಳೆ ಬೆಳವಣಿಗೆಗೆ ಬೇಕಾಗುವ ಎಲ್ಲಾ ಅವಕಾಶವನ್ನ ಮಾಡಿದ್ದಾರೆ. ಆರಂಭದಲ್ಲಿ ಡ್ರ್ಯಾಗನ್ ಹಣ್ಣಿನ ಬೇರನ್ನು ಸಂಭಂದಿಕರ ಜಮೀನಿನಿಂದ ತಂದು ನಾಟಿಮಾಡಿದ ನಂತರ  ಅದು ಆಕಾಶದೆತ್ತರಕ್ಕೆ ಬೆಳೆಯಲು ಪ್ರಾರಂಭಿಸಿತು.

 ಹೀಗೆ ಬೆಳೆದ ಬೆಳೆ ಬಾಗಿ ನಾಶವಾಗಬಾರದೆಂಬ ಕಾರಣಕ್ಕೆ ಆರೇಳು ಅಡಿಯ ಸಿಮೆಂಟಿನ ಕಂಬವನ್ನು ನೆಟ್ಟು ಬಳ್ಳಿ ಹಬ್ಬಲು ಅನುಕೂಲಮಾಡಿದ್ದಾರೆ. ಹೀಗೆ ಬೆಳೆದ ಡ್ರಾಗನ್ ಬಳ್ಳಿ ಕೊಡೆ ಆಕಾರದಲ್ಲಿ ಹಬ್ಬಿ ನಿಂತಿದೆ. ಇನ್ನು ಆರಂಭದಲ್ಲಿ ಹೂವು ಬಿಡುವ ಈ ಬಳ್ಳಿ ಆ ನಂತರ ಅದು ಕಾಯಿಯಾಗಿ ಕೆಂಪನೆಯ ಬಣ್ಣದ ಹಣ್ಣುಗಳಾಗಿ ಬದಲಾಗುತ್ತದೆ.

ಗಣಿ ನಾಡಲ್ಲಿ ದೇಶಿ ತಳಿಯ ಬೀಜಗಳನ್ನು ಬೆಳೆಯೋದೆ ಕಷ್ಟ. ಅಂತದ್ದರಲ್ಲಿ ರಾಜಶೇಖರ್ ಅವರು ವಿದೇಶಿ ತಳಿಯ ಈ ಡ್ರ್ಯಾಗನ್ ಹಣ್ಣು ಬೆಳೆದು ಸಾಧನೆ ಮಾಡಿದ್ದಾರೆ. ಇದರಲ್ಲಿ ಮೂರು ಬಣ್ಣದ ಹಣ್ಣುಗಳು ಬರುತ್ತವೆ. ಆ ಪೈಕಿ ಕೆಂಪು ಬಣ್ಣದ ಹಣ್ಣು ಕೂಡ ಒಂದಾಗಿದೆ. ಆರಂಭದಲ್ಲಿ ಎರಡು ಎಕರೆಗೆ ಅಂದಾಜು ೧೦ ಲಕ್ಷಕ್ಕೂ ಅಧಿಕ ಹಣವನ್ನು ಕರ್ಚುಮಾಡಿರುವ ರೈತ ರಾಜಶೇಖರ ದ್ರೋಣವಲ್ಲಿ ಅವರಿಗೆ ತೋಟಗಾರಿಕೆ ಇಲಾಖೆ ಕೂಡ ಈ ಬೆಳೆ ಬೆಳೆಯಲ ಸಹಕಾರ ನೀಡಿದೆ.

ಇನ್ನು ಈ ಡ್ರ್ಯಾಗನ್ ಹಣ್ಣಿನ ಕಟಾವು ಹಾಗೂ ಪ್ಯಾಕಿಂಗ್ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ರಾಜಶೇಖರ ಅವರ ಪತ್ನಿ ವಾಣಿ ಕೂಡ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ. ಮಧುಮೇಹಿಗಳಿಗೆ ಈ ಡ್ರ್ಯಾಗನ್ ಸೂಕ್ತ, ಈ ಹಣ್ಣಿನಲ್ಲಿ ನೀರಿನಾಂಶ, ನಾರಿನಾಂಶ, ಪ್ರೋಟೀನ್, ಓಮೆಗಾ- 3 ಹಾಗೂ 6 ಕೊಬ್ಬಿನ ಆಮ್ಲಗಳಿಂದ ಕೂಡಿದೆಯಲ್ಲದೇ, ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗಲಿದೆ. ರಕ್ತದೊತ್ತಡ, ಮಧುಮೇಹ ಹಾಗೂ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆಯಂತೆ.

ಇನ್ನು ಇದಕ್ಕೂ ಮೊದಲು ಎರಡು ಕೋಟಿ ವೆಚ್ಚದಲ್ಲಿ ಆರಂಭಿಸಿದ ಕೋಳಿ ಫಾರಂ ನಿಂದ ಇದೀಗ ತಕ್ಕ ಮಟ್ಟಿಗೆ ಆದಾಯ ಬರುತ್ತಿದೆ ಆದ್ರು ಮುಂದಿನ ದಿನಗಳಲ್ಲಿ ಕುಕ್ಕುಟೋಧ್ಯೊಮಕ್ಕೆ ಹೊಡೆತ ಬೀಳುವ ಆತಂಕದಲ್ಲಿದೆ ಈ ಕುಟುಂಭ. ಹಾಗಾಗಿ ಕ್ರಷಿಯತ್ತ ಮುಖ ಮಾಡಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದಾರೆ, ಇನ್ನು ಯಶಸ್ವಿ ಕ್ರಷಿಕ ಆಗಬೇಕಾದ್ರೆ ಬೆವರು ಸುರಿಸುವುದರ ಜೊತೆಗೆ ಇಂದಿನ ಆಧುನಿಕ ಜಗತ್ತಿಗೆ ಏನು ಬೇಕೆಂದು ಯೋಚಿಸಿ ಕ್ರಷಿಮಾಡುವ ರೈತ ಎಂದಿಗೂ ನಷ್ಟ ಅನುಭವಿಸುವುದಿಲ್ಲ ಎಂದು ರಾಜಶೇಖರ್ ತೋರಿಸಿಕೊಟ್ಟಿದ್ದಾರೆ.

ವರದಿ:…

ಸುಬಾನಿ ಪಿಂಜಾರ ವಿಜಯನಗರ.