You are currently viewing ಇಲ್ಲಿ ನಿಂತರೆ ಮೈ ಬಣ್ಣ ಬಂಗಾರವಾಗುತ್ತೆ,.

ಇಲ್ಲಿ ನಿಂತರೆ ಮೈ ಬಣ್ಣ ಬಂಗಾರವಾಗುತ್ತೆ,.

  • Post category:Top news

ವಿಜಯನಗರ…ವಿಶ್ವ ವಿಖ್ಯಾತ ಹಂಪೆಗೆ ದೇಶ ವಿದೇಶದಿಂದ ಪ್ರವಾಸಿಗರ ದಂಡೇ ಹರಿದು ಬರುತ್ತೆ, ಹೀಗೆ ಬಂದಂತ ಪ್ರವಾಸಿಗರು ಪ್ರಮುಖವಾಗಿ ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯವಿಠ್ಠಲ ದೇವಸ್ಥಾನ, ಕಲ್ಲಿನ ತೇರು, ಹೀಗೆ ಪ್ರಖ್ಯಾತಿಯನ್ನ ಪಡೆದಂತ ಹತ್ತು ಹಲವಾರು ವಾಸ್ತು ಶಿಲ್ಪಗಳನ್ನ ವೀಕ್ಷಣೆಮಾಡಿ ಕೊನೆಗೆ ಸಂಜೆ ಸಮಯಕ್ಕೆ ಹೇಮಕೂಟ ಪರ್ವತ ಹತ್ತುವುದು ಸರ್ವೇ ಸಾಮಾನ್ಯ.

ಹೌದು ಹಂಪಿಯ ಈ ಸ್ಥಳಕ್ಕೆ ಸಂಜೆ ಬೇಟಿ‌ ನೀಡಿದರೆ ಸೂರ್ಯಾಸ್ತದ ದೃಷ್ಯ ಮೈನವಿರೇಳಿಸುತ್ತದೆ. ವಿರೂಪಾಕ್ಷ ದೇವಸ್ಥಾನದ ಬಲ ಬಾಗದಲ್ಲಿರುವ ಈ ಹೇಮಕೂಟ ಪರ್ವತದ ಮೇಲೆ ದಿನವಿಡೀ ಪ್ರವಾಸಿಗರು ಕಾಣಸಿಗುವುದಿಲ್ಲ, ಆದರೆ ಸಂಜೆ ಆದರೆ ಸಾಕು ಇಲ್ಲಿನ ಕಲ್ಲು ಬಂಡೆಗಳ ಮೇಲೆ ಪ್ರವಾಸಿಗರ ದಂಡೆ ಸೇರಿರುತ್ತೆ. ಸಹಜವಾಗಿ ಹಂಪಿಗೆ ಪ್ರವಾಸಕ್ಕೆ ಬಂದ ಪ್ರತಿಯೊಬ್ಬ ದೇಶ ವಿದೇಶಿಗರು ದಿನವಿಡೀ ಹಂಪಿಯ ಪ್ರತಿಯೊಂದು ಸ್ಮಾರಕವನ್ನ ವೀಕ್ಷಣೆಮಾಡಿ ಸಂಜೆಯಾಗುತ್ತಿದ್ದಂತೆ ಈ ಹೇಮಕೂಟ ಪರ್ವತವನ್ನ ಹತ್ತಿ ಇಲ್ಲಿನ ಸುಂದರ ಪರಿಸರವನ್ನ ಕಣ್ಣುತುಂಬಿಕೊಳ್ಳುತ್ತಾರೆ.

ಅದರಲ್ಲೂ ಇಲ್ಲಿನ ಸಂಜೆಯ ಸೂರ್ಯಾಸ್ತದ ದೃಷ್ಯ ನೋಡುಗರನ್ನ ಬಂಗಾರದ ಲೋಖಕ್ಕೇ ಕರೆದೊಯ್ಯೂತ್ತೆ, ಹಾಗಾಗಿ ದೇಶ ವಿದೇಶಗಳಿಂದ ಬಂದ ಪ್ರವಾಸಿಗರು ದಿನವಿಡೀ ಹಂಪೆಯನ್ನ ಸುತ್ತಿ ಸುತ್ತಿ ಸುಸ್ತಾದರೂ ಇಲ್ಲಿ ಕೆಲವೊತ್ತು ತಮ್ಮ ಎಲ್ಲಾ ದಣಿವನ್ನ ಮರೆತು ಕಾಲ ಕಳೆಯುತ್ತಾರೆ.

ಇಲ್ಲಿನ ಸಂಜೆಯ ಪರಿಸರ ಕೆಲವರನ್ನ ಮೈ ಮರೆಯುವಂತೆ ಮಾಡಿದ್ರೆ, ಇನ್ನೂ ಕೆಲವರನ್ನ ದ್ಯಾನ ಲೋಕಕ್ಕೆ ಕರೆದೊಯ್ಯೂತ್ತೆ, ಹಾಗಾಗಿ ಭಾರತೀಯ ಸಂಸ್ಕ್ರತಿಯ ಮೇಲೆ ನಂಬಿಕೆಯುಳ್ಳ ದೇಶ ವಿದೇಶಿಗರು ಇಲ್ಲಿ ಕೆಲವೊತ್ತು ದ್ಯಾನದಲ್ಲಿ ತೊಡಗಿಕೊಳ್ಳುವುದು ಸರ್ವೇ ಸಾಮಾನ್ಯೆವಾಗಿದೆ.

ಒಟ್ಟಿನಲ್ಲಿ ಯಾವುದೇ ವಯೋಮಾನದವರಾದ್ರು ಸೈ ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ ಹಂಪಿ,ಹಾಗೆ ಹಂಪೆಯಲ್ಲಿ ಒಂದಲ್ಲ ಒಂದು ವಿಶೇಷ ಸ್ಥಳಗಳಿರುವುದೂ ಸತ್ಯ ಅವುಗಳನ್ನ ತಿಳಿದುಕೊಳ್ಳುವ ತಾಳ್ಮೆ ಮತ್ತು ಮನಸ್ಸು ಇಲ್ಲಿಗೆ ಬರುವ ಪ್ರವಾಸಿಗನಿಗೆ ಇರಬೇಕು, ಅಂದಾಗ ಮಾತ್ರ ಹಂಪಿಗೆ ಕೈಗೊಂಡಿರುವ ಪ್ರವಾಸ ಸಾರ್ಥಕವಾಗುವುದು ಮತ್ತು ಇಲ್ಲಿನ ಮಹತ್ವ ತಿಳಿಯುವುದು,

ವೀಡಿಯೊ ನೋಡುವ ಇಷ್ಟ ನಿಮಗೆ ಇದ್ದರೆ ಈ ಕೆಳಗಿನ ಲಿಂಕ್ ಒತ್ತಿರಿ.

https://youtu.be/5-wgLlYJUBM

ವರದಿ…ಸುಬಾನಿ ಪಿಂಜಾರ.ವಿಜಯನಗರ.