.
ವಿಜಯನಗರ.ಶಾಲಾಮಕ್ಕಳ ಬೆನ್ನುಬಿದ್ದಾಯ್ತು, ಆರೋಗ್ಯ ಸಿಬ್ಬಂದಿ ಆಯ್ತು, ಜನ ಸಾಮಾನ್ಯರ ಸರಣಿ ಅಂತೂ ಮೊದಲೆ ಮುಗಿದಿತ್ತು. ಇದೀಗ ಪೊಲೀಸ್ ಸಿಬ್ಬಂದಿಗಳ ಬೆನ್ನುಬಿದ್ದಿದೆ ಮಹಾಮಾರಿ ಕೊರೊನ, ಹೌದು ಇದೀಗ ವಿಜಯನಗರ ಜಿಲ್ಲೆಯಲ್ಲಿ ಹತ್ತು ಜನ ಪೊಲೀಸ್ ಸಿಬ್ಬಂದಿಗಳಲ್ಲಿ ಕಾಣಿಸಿಕೊಂಡಿದೆ ಮಹಾಮಾರಿ ಕೊರೊನ.
ಅನಾರೋಗ್ಯಕ್ಕೆ ಒಳಗಾದ ಸಿಬ್ಬಂದಿಗಳ ಪರೀಕ್ಷೆಗೆ ಒಳಪಡಿಸಿದ ಹಿನ್ನೆಲೆಯಲ್ಲಿ ನಿನ್ನೆ ಜಿಲ್ಲೆಯ ಹತ್ತು ಜನ ಪೊಲೀಸ್ ಸಿಬ್ಬಂದಿಗಳಿಗೆ ಕಾವಿಡ್ ಪಾಸಿಟಿವ್ ಸೋಂಕು ಕಾಣಿಸಿಕೊಂಡಿದೆ.
ಅದರಲ್ಲೂ ಹತ್ತು ಜನರಲ್ಲಿ ಏಳು ಜನ ಪೊಲೀಸ್ ಸಿಬ್ಬಂದಿಗಳು ಹಂಪಿ ಪ್ರವಾಸಿ ಪೊಲೀಸ್ ಠಾಣೆಗೆ ಸೇರಿದವರು ಎನ್ನುವ ಸುದ್ದಿ ಬೆಚ್ಚಿಬೀಳಿಸಿದೆ.
ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿರುವ ಹಂಪಿಯಲ್ಲಿ ಪ್ರತಿ ದಿನ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಮತ್ತು ಭಕ್ತರು ಸೇರುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿತ್ತು, ಕೊವಿಡ್ ಸೋಂಕು ಹೆಚ್ಚಾಗುವುದನ್ನ ಮನಗಂಡ ಸರ್ಕಾರ ಇತ್ತೀಚೆಗೆ ಹಂಪಿಯಲ್ಲಿ ಕರ್ಪ್ಯೂ ಜಾರಿ ಮಾಡಿ ಯಾವೊಬ್ಬ ಪ್ರವಾಸಿಗರು ಇತ್ತ ಸುಳಿಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರು.
ಆದರೆ ಭದ್ರತೆ ನೀಡುವ ಪೊಲೀಸರನ್ನ ಬೆನ್ನುಬಿದ್ದು ಕಾಡುತ್ತಿದೆ ಕೊರೊನ ಮಹಾಮಾರಿ. ಇನ್ನುಳಿದಂತೆ ಹಡಗಲಿಯಲ್ಲಿ ಒಬ್ಬರು,ಹರಪನಹಳ್ಳಿಯಲ್ಲಿ ಒಬ್ಬರು, ಮತ್ತು ಕೂಡ್ಲಿಗಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯಲ್ಲಿ ಕೊವಿಡ್ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ತಮ್ಮ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ವಿಷಯವನ್ನ ವಿಜಯನಗರ ಎಸ್ಪಿ. ಡಾಕ್ಟರ್.ಅರುಣ್. ಕೆ ಅವರೇ ಮಾದ್ಯಮಗಳಿಗೆ ತಿಳಿಸಿದ್ದಾರೆ,ಅದಲ್ಲದೆ ಸೋಂಕು ಕಾಣಿಸಿಕೊಂಡಿರುವ ಸಿಬ್ಬಂದಿಗಳು ಹೋಂ ಐಸುಲೇಷನಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ ವಿಜಯನಗರ.