ವಿಜಯನಗರ (ಹೊಸಪೇಟೆ) ಅಖಂಡ ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ವಿಭಜನೆಯಾಗಿ ಒಂದು ವರ್ಷ ಕಳೆಯಿತು. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರ ಅನುಕೂಲಕ್ಕೆ ಏನೇನು ಬದಲಾವಣೆಗಳು ಆಗಬೇಕು ಅವುಗಳು ಒಂದೊಂದಾಗಿ ಆಗುತ್ತಿವೆ.
ಅದೇ ರೀತಿಯಾಗಿ ಪೊಲೀಸ್ ಇಲಾಖೆಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಆಗಿದ್ದು ಎಲ್ಲರ ಗಮನಕ್ಕೆ ಇದೆ. ಆರಂಭದಲ್ಲಿ ಈ ಹಿಂದೆ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗೆ ಇದ್ದ ಮೊಬೈಲ್ ಕಾಂಟೆಕ್ಟ್ ನಂಬರನ್ನ ಬದಲಾಯಿಸಿದ್ದು ಎಲ್ಕರಿಗೂ ಸರ್ವೇ ಸಾಮಾನ್ಯವಾಗಿ ಗೊತ್ತಿದೆ, 9480803001 ಸರಣಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಂಪರ್ಕಕ್ಕೆ ಇದ್ದ ಮೊಬೈಲ್ ನಂಬರ್ ಆಗಿತ್ತು.
ಕೊನೆಯ ಒಂದಂಕೆ ಎರಡಂಕೆಗಳನ್ನ ಬದಲಿಸಿ ಪೊನ್ ಮಾಡಿದರೆ ಬಳ್ಳಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನ ಸಂಪರ್ಕಿಸಲು ಜನ ಸಾಮಾನ್ಯರಿಗೆ ಅನುಕೂಲವಾಗುತಿತ್ತು.ಈ ಕಾರಣದಿಂದ ಒಂದೇ ಸೀರಿಸನ ಸಿ.ವಿ.ಜಿ ನಂಬರನ್ನ ಇಲಾಖೆಗಳಿಗೆ ಸರ್ಕಾರ ನೀಡಿದೆ.
ಆದರೆ ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ವಿಭಜನೆ ಆದ ಮೇಲೆ ಪೊಲೀಸ್ ಇಲಾಖೆಗೆ ಕೊಟ್ಟಿದ್ದ ಪೊನ್ ನಂಬರ್ ಸೀರಿಸ್ ಬದಲಾಗಿದೆ.9480803001 ಬಳ್ಳಾರಿ ಎಸ್ಪಿಯವರ ಸಂಪರ್ಕದ ನಂಬರ್ ಆಗಿದ್ದರೆ, ಹೊಸ ವಿಜಯನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ 9480805701 ನಂಬರ್ ಕೊಡಲಾಗಿದೆ, ಇದೇ ಕ್ರಮ ಸಂಖೆಯಲ್ಲೇ ಮುಂದುವರೆದು ಜಿಲ್ಲೆಯ ಇನ್ನುಳಿದ ಅಧಿಕಾರಿಗಳಿಗೆ ಪೊನ್ ನಂಬರ್ ಕೊಡಲಾಗಿದೆ.
ಹೀಗೆ ಬದಲಾದ ಪೊನ್ ಸಂಪರ್ಕದ ನಂಬರ್ ವಿಜಯನಗರ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ತಲುಪಿಸಿ ಸರಿ ಸುಮಾರು ಒಂದು ವರ್ಷ ಕಳೆಯುತ್ತಾ ಬಂದಿದೆ, ಈ ಬದಲಾದ ಪೊನ್ ನಂಬರ್ ಜನ ಸಾಮಾನ್ಯರಿಗೆ ಗೊತ್ತಾದರೆ, ತಮಗೆ ಯಾವುದೇ ತೊಂದರೆ ಎದುರಾದರೂ ರಕ್ಷಣೆ ಕೋರಿ ಪೊಲೀಸ್ ಅಧಿಕಾರಿಗಳನ್ನ ಸಂಪರ್ಕಿಸಬಹುದು, ಈ ಉದ್ದೇಶದಿಂದಲೇ ಸರ್ಕಾರ ಒಂದೇ ಸರಣಿಯ ಸೀರಿಯಲ್ ಪೊನ್ ನಂಬರ್ ಗಳನ್ನ ವಿಜಯನಗರ ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಕೊಡಲಾಗಿದೆ.
ಆದರೆ ಬದಲಾಗಿರುವ ಈ ಪೊನ್ ನಂಬರ್ ಬಹುತೇಕ ಪ್ರದೇಶಗಳಲ್ಲಿ ತಿದ್ದುಪಡಿ ಆಗದೆ ಇರುವುದು ವಿಜಯನಗರ ಜಿಲ್ಲೆಯಲ್ಲಿ ಕಂಡು ಬರುತ್ತಿದೆ. ಅದರಲ್ಲೂ ಪ್ರಮುಖ ಪ್ರವಾಸಿ ತಾಣವಾಗಿರುವ ತುಂಗಭದ್ರ ಜಲಾಶಯದ ತಿರುಮಲ ಉದ್ಯಾನ ವನದಲ್ಲಿ ಹಾಕಲಾಗಿರುವ ಸೂಚನ ಫಲಕದಲ್ಲಿ, ಬಳ್ಳಾರಿ ಜಿಲ್ಲೆ ಇದ್ದ ಸಂದರ್ಭದಲ್ಲೇ ಕೊಟ್ಟಿರುವ ಪೊನ್ ನಂಬರ್ ಗಳೇ ಇನ್ನೂ ಹಾಗೆ ಉಳಿದಿವೆ.
ಸೂಚನ ಫಲಕದಲ್ಲಿರುವ ಹಳೆ ನಂಬರ್
DSP Hospet..ಹಳೆಯ ನಂಬರ್ 9480803023
ಬದಲಾಗಬೇಕಿರುವ. ಪೊನ್ ನಂಬರ್ 9480805720
CPI Tb Dam ಹಳೆಯ ನಂಬರ್ 9480803040 ಬದಲಾಗಬೇಕಿರುವ ಪೊನ್ ನಂಬರ್ 9480805731.
Psi Tb Dam ಹಳೆಯ ನಂಬರ್ 9480803072
ಬದಲಾಗಬೇಕಿರುವ ಪೊನ್ ನಂಬರ್ 9480805754
ಈ ಮೂರು ಜನ ಅಧಿಕಾರಿಗಳ ಬದಲಾದ ಪೊನ್ ನಂಬರ್ ಗಳನ್ನ ತಿದ್ದುಪಡಿಮಾಡದೆ ಹಾಗೆ ಬಿಡಲಾಗಿದೆ. ಇದರಿಂದ ತುಂಗಭದ್ರ ಜಲಾಶಯಕ್ಕೆ ಬೇಟಿ ನೀಡುವ ಪ್ರವಾಸಿಗರಿಗೆ ಯಾವುದೇ ತೊಂದರೆ ಎದುರಾದರು, ಪೊಲೀಸ್ ಇಲಾಖೆಯನ್ನ ಸಂಪರ್ಕಿಸುವುದು ಕಷ್ಟ ಸಾಧ್ಯವಾಗಬಹುದು. ಹಾಗಾಗಿ ಪೊಲೀಸ್ ಇಲಾಖೆಯ ವತಿಯಿಂದ ಹೊಸ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಹಾಕಲಾಗಿರುವ ಹಳೆಯ ಸೂಚನ ಫಲಕಗಳಲ್ಲಿನ ಪೊನ್ ನಂಬರ್ ಗಳನ್ನ ತಿದ್ದುಪಡಿಮಾಡಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಜನ ಸಾಮಾನ್ಯರ ಒತ್ತಾಯಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.