ವಿಜಯನಗರ…ಕಳೆದ ಎರಡು ತಿಂಗಳ ಹಿಂದೆ ಭಾರತೀಯ ಪುರಾತತ್ವ ಇಲಾಖೆಯ ಸುಪರ್ಧೆಯಲ್ಲಿರುವ ಹಿರೇಹಡಗಲಿಯ ಕಲ್ಲೇಶ್ವರ ದೇವಸ್ಥಾನದ ಗೋಪುರವನ್ನ ನಿಧಿ ಆಸೆಗೆ ದ್ವಂಶಗೊಳಿಸಿದ ಸುದ್ದಿ ಇನ್ನೂ ಜನ ಮಾನಸದಿಂದ ದೂರವಾಗಿಲ್ಲ. ಈ ಘಟನೆಯನ್ನ ಜನಗಳು ಮರೆಯುವ ಮುನ್ನವೇ ಮತ್ತೊಂದು ನಿಧಿ ಚೋರರ ಕೃತ್ಯ ಬೆಳಕಿಗೆ ಬಂದಿದೆ. ಹೌದು ದೇಶದ ಐತಿಹಾಸಿಕ ಸ್ಥಳಗಳ ಪಟ್ಟಿಯಲ್ಲಿ ಹಣೆ ಪಟ್ಟಿಗಿರುವ ಹಂಪಿಯಲ್ಲಿ ಇಂತದ್ದೊಂದು ಪ್ರಕರಣ ಬಯಲಿಗೆ ಬಂದಿದ್ದು, ಕೆಲವು ಸ್ಥಳೀಯ ನಿಧಿ ಚೋರರು ಈ ಕೃತ್ಯ ಎಸಗಿರುವುದಾಗಿ ಸ್ಥಳೀಯವಾಗಿ ಗುಮಾನೆ ಇದೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರದಿಂದ ಕಂಪ್ಲಿಗೆ ಹೋಗುವ ಮಾರ್ಗ ಮದ್ಯದ ಹೆಂಡ ಮಾರುವ ಗುಂಡದ ಬಳಿಯಲ್ಲಿ ಇಂತದ್ದೊಂದು ಪ್ರಕರಣ ನಡೆದಿದೆ. ಇಲ್ಲಿರುವ ಜೈನ್ ದೇವಸ್ಥಾನದ ಒಳಗಡೆಯ ಪಾಣಿ ಪೀಠವನ್ನ ಅಗೆದು ನಿಧಿ ಶೋಧನೆ ಮಾಡಲಾಗಿದೆ. ಕಳೆದ ಅಮವಾಸೆ ದಿನದಂದು ಈ ಕೃತ್ಯ ನಡೆದಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ. ಇಲ್ಲಿನ ಹಂಪಿ ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸಿಗರನ್ನ ಈ ಸ್ಥಳಕ್ಕೆ ಕರೆದೊಯ್ದಾಗ ಈ ಸತ್ಯ ಬಯಲಾಗಿದೆ.
ನಿಧಿ ಚೋರರ ಕೃತ್ಯವನ್ನ ಕಂಡು ದಂಗಾಗಿರುವ ಗೈಡ್ ಗಳು ಅಲ್ಲಿನ ಸ್ಥಿತಿಯನ್ನ ತಮ್ಮ ಮೊಬೈಲನಲ್ಲಿ ಸೆರೆಹಿಡಿದಿದ್ದಾರೆ.
ಸುಮಾರು ಆರು ಅಡಿ ಆಳದಷ್ಟು ಅಗೆದಿರುವ ನಿಧಿ ಚೋರರು, ಶೋಧನೆಗೆ ಮುನ್ನ ಪೂಜೆಮಾಡಿರುವ ಗುರುತುಗಳು ಸ್ಥಳದಲ್ಲಿ ಸಿಕ್ಕಿವೆ. ನಿಧಿ ಶೋದನೆಯ ಸುದ್ದಿ ಎಲ್ಲೆಡೆ ಹಬ್ಬುತಿದ್ದಂತೆ, ಅಗೆದ ಆ ಸ್ಥಳವನ್ನ ಮತ್ತೆ ಮಣ್ಣಿನಿಂದ ಮುಚ್ಚಿ ಸಾಕ್ಷಿ ನಾಶಪಡಿಸಿದ್ದಾರೆ ನಿಧಿ ಚೋರರು. ಇನ್ನು ಈ ರೀತಿಯ ನಿಧಿ ಶೋಧನ ಪ್ರಕರಣ ಹಂಪಿಯಲ್ಲಿ ಇದೇ ಮೊದಲೇನಲ್ಲ.
ಈ ಹಿಂದೆ ಮಾಲ್ಯವಂತ ದೇವಸ್ಥಾನದ ಕೆಳಗೆ ಇರುವ ಗಾಳಿಗೋಪುರ ದ್ವಂಶಮಾಡಲಾಗಿತ್ತು, ಅದೇ ರೀತಿ ಕೋಟಿಲಿಂಗವನ್ನ ಕೂಡ ದ್ವಂಶಗೊಳಿಸಲಾಗಿತ್ತು. ಇನ್ನುಳಿದಂತೆ ಹಂಪಿಯಲ್ಲಿ ಆಹಾಗಾಗ ಇಂತಾ ನಿಧಿ ಶೋದನ ಪ್ರಕರಣ ಬೆಳಕಿಗೆ ಬರುತ್ತಲೇ ಇವೆ. ಆದರೆ ಆರೋಪಿಗಳು ಮಾತ್ರ ಇದು ವರೆಗೆ ಪತ್ತೆಯಾಗಿಲ್ಲ.ಭಾರರತೀಯ ಪುರಾತತ್ವ ಇಲಾಖೆಯ ಹಾಗೂ ರಾಜ್ಯ ಪುರಾತತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ, ಸ್ಥಳೀಯ ಪೊಲೀಸ್ ಇಲಾಖೆ ಇಲ್ಲಿ ಹದ್ದಿನ ಕಣ್ಣಿನಲ್ಲಿ ಕಾರ್ಯನಿರ್ವಹಿಸುತಿದ್ದರೂ ಇಂತ ಕೃತ್ಯಗಳು ಪದೇ ಪದೆ ಸಂಭವಿಸುತ್ತಲೇ ಇವೆ.
2014ರಲ್ಲಿ ಮೂಲ ವಿರೂಪಾಕ್ಷೇಶ್ವರ ದೇವಸ್ಥಾನದ ಪಾಣಿಪೀಠದ ಕಲ್ಲನ್ನ ಕದಿಯಲು ಬಂದಿದ್ದ ಆಂದ್ರಪ್ರದೇಶ ಮೂಲದ ನಾಲ್ಕು ಜನರನ್ನ ಬಂದಿಸಿದ್ದನ್ನ ಬಿಟ್ಟರೆ ಇನ್ನುಳಿದ ಯಾವ ಪ್ರಕರಣಗಳೂ ಪತ್ತೆಯಾಗದೆ ಉಳಿದಿರವುದು ದುರಂತದ ವಿಚಾರ. ಸದ್ಯಕ್ಕೆ ಇಂದು ಬೆಳಕಿಗೆ ಬಂದಿರುವ ಈ ನಿಧಿ ಶೋಧನೆಯ ಆರೋಪಿಗಳನ್ನ ಪೊಲೀಸರು ಶೋಧಿಸಬೇಕಿದೆ.
ಇಲ್ಲವಾದರೆ ಹಂಪೆಯ ಅಪರೂಪದ ಸ್ಮಾರಕಗಳಿಗೆ ಅಳಿಗಾಲ ತಪ್ಪಿದ್ದಲ್ಲ.
ವೀಡಿಯೊ ವೀಕ್ಷಣೆಗೆ ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.