ಚಿಕ್ಕಮಗಳೂರು..ಹೌದು ನಾ ಕಂಡ ಆಶ್ಚರ್ಯದ ವಾಸ್ತವ ಸ್ಥಿತಿ ಇದು. ಒಂದು ಸಾರಿ ಮೇಲಿ ಕಾಣುವ ಫಲಕವನ್ನ ನೀವೆ ನೋಡಿ ಬಿಡಿ, ಒಂದು ವೇಳೆ ಅದನ್ನ ನಿಮಗೆ ನಂಬಲು ಸಾಧ್ಯವಾಗದೆ ಇದ್ರೆ ಈ ಸ್ಟೋರಿಯನ್ನ ಸಂಪೂರ್ಣ ಓದಿ. ಸಹಜವಾಗಿ ಇಂತಾ ಕ್ವಾಲಿಟಿ ಕಂಟ್ರೋಲ್ ಬೋರ್ಡ್ ನಿಮಗೆ ಕಾಣ ಸಿಗುವುದು ಖಾಸಗಿ ಕಾರ್ಖಾನೆಗಳಲ್ಲಿ, ಆ ಸಂದರ್ಭದಲ್ಲಿ ಉತ್ಪಾದನೆ ಆದ ಸರಕು ಗುಣಮಟ್ಟ ಹೇಗಿದೆ, ಅದನ್ನ ಉತ್ಪಾದನೆ ಮಾಡಿದ ಕಾರ್ಮಿಕರು ಯಾರು, ಅವರ ಮೇಲುಸ್ತುವಾರಿ ನಡೆಸಿದ ಮುಖ್ಯಸ್ಥ ಯಾರು, ಉತ್ಪಾದನೆ ಆಗಿರುವ ಸರಕಿನ ಕ್ವಾಲಿಟಿ ಹೇಗಿದೆ, ಯಾವ ಸಮಯ ಸಂದರ್ಭದಲ್ಲಿ ಇದನ್ನ ತಪಾಸಣೆ ಮಾಡಲಾಯಿತು ಎಂದು ಆಯಾ ಕಂಪನಿಯಲ್ಲಿ ಒಂದೊಂದು ಘಟಕಗಳಲ್ಲಿ ಇಂತಾ ಫಲಕಗಳನ್ನ ನಾವು ಕಾಣುತ್ತೇವೆ.
ಅಂದಹಾಗೆ ಇಂತಾ ಕ್ವಾಲಿಟಿ ಕಂಟ್ರೊಲ್ ಬೋರ್ಡ್ ಒಂದನ್ನ ಸೌಚಾಲಯದ ಬಾಗಿಲಲ್ಲಿ ಕಂಡಿದ್ದು ನಮ್ಮ ಕಾಫಿ ನಾಡು ಚಿಕ್ಕಮಂಗಳೂರು ಬಸ್ ನಿಲ್ದಾಣದಲ್ಲಿ.ಸಹಜವಾಗಿ ಸೌಚಾಲಯದ ಒಳಗಡೆ ಹೋಗುವ ಭರದಲ್ಲಿ ಯಾರು ಈ ಫಲಕವನ್ನ ನೋಡುವುದಿಲ್ಲ, ಒಳಗಡೆ ಹೋಗಿ ಹೊರಗೆ ಬಂದ ನಂತರ ಸೇವಾ ಶುಲ್ಕ ನೀಡುವ ಸಂದರ್ಭದಲ್ಲಿ ಈ ಬೋರ್ಡ್ ಪ್ರತಿಯೊಬ್ಬರ ಕಣ್ಣಿಗೆ ಬೀಳುತ್ತದೆ. ಆ ಕ್ಷಣ ನೋಡಿದ ಎಲ್ಲರು ಅರೆ ಏನಿದು ಬೋರ್ಡ್ ಎಂದು ಕಣ್ಣರಳಿಸಿ ನೋಡುತ್ತಾರೆ.
ಪ್ರತಿಯೊಂದು ಸರ್ಕಾರಿ ಬಸ್ ನಿಲ್ದಾಣದಲ್ಲಿ ಆಗಲಿ ಸರ್ಕಾರಿ ಕಛೇರಿಯಲ್ಲಿ ಆಗಲಿ, ಅಥವಾ ಇನ್ನಿತರ ನಗರ ಪಟ್ಟಣ ಪ್ರದೇಶದ ಸುಲಭ ಸೌಚಾಲಯದಲ್ಲಿ ಇದೇ ರೀತಿಯ ಬೋರ್ಡ್ ನೇತು ಹಾಕಿದರೆ ಹೇಗಿರುತ್ತೆ ಎನ್ನುವುದು ಎಲ್ಲರ ಮನಸಿನಲ್ಲಿ ಮೂಡಿಬರುತ್ತೆ.
ಕೇವಲ ಬೋರ್ಡ್ ನೇತು ಹಾಕಿದರೆ ಸಾಲದು, ಅದಕ್ಕೆ ತಕ್ಕಂತೆ ಸ್ವಚ್ಚತೆ ಕಾರ್ಯ ಕೈಗೊಳ್ಳುವುದು ಕೂಡ ಮುಖ್ಯ. ಆ ಕೆಲಸವನ್ನ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಅಧಿಕಾರಿಗಳು ಮಾಡುತಿದ್ದಾರೆ.
ಆ ದಿನ ಸೌಚಾಲಯದ ಸ್ವಚ್ಚತೆಗೆ ಬಳಕೆಯಾದ ಪಿನಾಯಿಲ್, ಆ್ಯಸಿಡ್ ಸೇರಿದಂತೆ ಸ್ವಚ್ಚತೆಯ ಮೇಲುಸ್ತುವಾರಿ ವಹಿಸಿದವರ ಸಹಿ ಈ ಬೋರ್ಡಲ್ಲಿ ಕಾಣಲಾಗುತ್ತೆ, ಇದು ಆಶ್ಚರ್ಯವಾದರು ಸತ್ಯ.
ಇನ್ನು ಸ್ವಚ್ಚತೆಯನ್ನ ಕೇವಲ ಬೋರ್ಡಲ್ಲಿ ಮಾತ್ರ ತೋರಿಸಿಲ್ಲ ಇಲ್ಲಿನ ಅಧಿಕಾರಿಗಳು, ಅದಕ್ಕೆ ತಕ್ಕಂತೆ ಸೌಚಾಲಯಗಳ ಸ್ವಚ್ಚತೆಯನ್ನ ಸಹ ಕಾಪಾಡಿದ್ದಾರೆ,
ನಾವು ಕಂಡಂತೆ ಬಹುತೇಕ ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆ ಇಲ್ಲದೆ ಗಬ್ಬೆದ್ದು ನಾರುವ ಸೌಚಾಲಯಗಳಲ್ಲಿ ಉಸಿರಾಡಲು ಸಾಧ್ಯವಾಗದೆ ಮೂಗು ಮುಚ್ಚಿಕೊಂಡು ಸೌಚಕಾರ್ಯ ಮುಗಿಸಿ ಮರಳುವ ಅನುಭವ.
ಮುಚ್ಚಿದರೂ ನಿಲ್ಲದ ಬಾಗಿಲ ಕದಗಳು ಇರುವುದನ್ನ ಕಂಡಿದ್ದೇವೆ, ಆದರೆ ಇಲ್ಲಿ ಅದನ್ನೆಲ್ಲ ಸರಿ ದೂಗಿಸುವ ಕಾರ್ಯವನ್ನ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಅಧಿಕಾರಿಗಳು ಮಾಡಿದ್ದಾರೆ,ಅವರಿಗೆ ಒಂದು ಸಲಾಮ್ ಹೇಳಲೆ ಬೇಕು.ಪ್ರತಿಯೊಂದು ಬಸ್ ನಿಲ್ದಾಣದಲ್ಲಿ ಇದೇ ರೀತಿಯ ಸ್ವಚ್ಚತೆಯನ್ನ ಕಾಪಾಡಿದರೆ ನಷ್ಟದಲ್ಲಿರುವ ನಮ್ಮ ಸಾರಿಗೆ ವ್ಯವಸ್ಥೆ ಇದರಿಂದಾದರು ಸರಿಯಾಗಬಹುದೆ.?
ವರದಿ..ಸುಬಾನಿ ಪಿಂಜಾರ.ವಿಜಯನಗರ.