ವಿಜಯನಗರ.. ರಾಜ್ಯಾಧ್ಯಂತ ಕಳೆದ ಒಂದು ವಾರದಿಂದ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದರ ಪರಿಣಾಮ ನದಿ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ, ಅದರ ಪರಿಣಾಮ ರಸ್ತೆಯಲ್ಲಿ ಸಂಚರಿಸುವ ವಾಹನಗಳು ನೀರಿನ ಹರಿವಿಗೆ ಸಿಕ್ಕು ಸಾಕಷ್ಟು ತೊಂದರೆಯನ್ನ ಜನ ಸಾಮಾನ್ಯರು ಅನುಭವಿಸಿದ್ದಾರೆ. ಈಗಿರುವಾಗ ಇಲ್ಲೊಬ್ಬ ಕಲ್ಲ್ಯಾಣ ಕರ್ನಾಟಕ ಸಾರಿಗೆಯ ಬಸ್ ಚಾಲಕನೊಬ್ಬ ದುಸ್ಸಾಹಸಕ್ಕೆ ಕೈಹಾಕಿ ಪಾರಾಗಿದ್ದಾನೆ. ಇಂತದ್ದೊಂದು ಘಟನೆ ನಡೆದಿರುವುದು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಾಲ್ ತಿಮ್ಮಲಾಪುರ ಗ್ರಾಮದ ಬಳಿಯಲ್ಲಿ.
ಹೌದು ಹೂವಿನ ಹಡಗಲಿ ಬಸ್ ಡಿಪೊಗೆ ಸೇರಿದ ಸಾರಿಗೆ ಬಸ್ ಇದಾಗಿದ್ದು ಪ್ರಯಾಣಿಕನ್ನ ತುಂಬಿಕೊಂಡ ಚಾಲಕ ತಿಪ್ಪಾಪುರ ಗ್ರಾಮದ ಬಳಿಯಲ್ಲಿ ತುಂಬಿ ಹರಿಯುವ ಹಳ್ಳದಲ್ಲಿ ಬಸ್ ಚಲಾಯಿಸಿ ಬಸ್ಸಲ್ಲಿದ್ದ ಪ್ರಯಾಣಿಕರಲ್ಲಿ ನಡುಕ ಹುಟ್ಟಿಸಿದ್ದಾನೆ. ಬಸ್ಸಿನ ಟೈರ್, ಸೈಲನ್ಸರ್, ಸಂಪೂರ್ಣ ಮುಳುಗಿ ಹೋಗಿದ್ದರು ಬಸ್ಸನ್ನ ನಿಲ್ಲಿಸದೆ ಬಸ್ ಚಲಾಯಿಸುವುದನ್ನ ನೋಡಿದರೆ ಒಂದು ರೀತಿಯಲ್ಲಿ ಜನಗಳ ಜೀವದ ಜೊತೆ ಚಲ್ಲಾಟ ಆಡಿದ್ದು ಗೋಚರವಾಗುತ್ತಿದೆ. ಬಸ್ಸಲ್ಲಿ ಇದ್ದ ಜನಗಳ ಅದೃಷ್ಟ ಸ್ವಲ್ಪ ಕೊಟ್ಟಿದ್ರು ದೊಡ್ಡ ದುರಂತವೇ ನಡೆದುಬಿಡುತಿತ್ತು. ಚಾಲಕನ ಈ ದುಸ್ಸಾಹಸವನ್ನ ಸ್ಥಳೀಯರೊಬ್ಬರು ತಮ್ಮ ಮೊಬೈಲನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಬಾರಿ ವಿರೋಧಗಳು ವ್ಯಕ್ತವಾಗಿದೆ.
ಇನ್ನು ಹೂವಿನ ಹಡಗಲಿ ತಾಲೂಕಿನ ತಿಮ್ಮಲಾಪುರ ಬಳಿ ಇರುವ ಈ ಹಳ್ಳಕ್ಕೆ ಸೇತುವೆ ನಿರ್ಮಾಣಮಾಡಿ ನಮ್ಮ ಗ್ರಾಮದ ರಸ್ತೆ ಸಂಪರ್ಕವನ್ನ ಸರಳವಾಗಿಸಿ ಎಂದು ಹಾಲ್ ತಿಮ್ಮಲಾಪುರ ಗ್ರಾಮದ ಜನ ಸಾಮಾನ್ಯರು ಸಾಕಷ್ಟುಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ, ಅದರ ಪರಿಣಾಮ ಪ್ರತಿ ವರ್ಷ ಮಳೆಗಾಲ ಬಂತೆಂದ್ರೆ ಸಾಕು ಹಳ್ಳು ತುಂಬಿ ಹರಿದು ಹಾಲ್ ತಿಮ್ಮಲಾಪುರ ಗ್ರಾಮಕ್ಕೆ ಸಂಪರ್ಕ ಕಡಿತವಾಗಿಬಿಡುತ್ತೆ. ಕೇವಲ ಕೇವಲ ಇಪ್ಪತ್ತರಿಂದ ಮುವತ್ತು ಮೀಟರಷ್ಟು ದೂರ ಸೇತುವೆ ನಿರ್ಮಾಣಮಾಡಿದರೆ ಈ ಗ್ರಾಮದ ಜನಕ್ಕೆ ಬಂದಿರುವ ಕಂಟಕ ದೂರಾಗುತ್ತೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಇಂತಾ ದುರ್ಘಟನೆಯಲ್ಲಿ ಸಾವನ್ನಪ್ಪಿದ ಸಂತ್ರಸ್ಥರಿಗೆ ಪರಿಹಾರ ಕೊಡುವ ಸರ್ಕಾರ ಸಾವು ಸಂಭವಿಸದಂತೆ ತಡೆಗಟ್ಟಲು ಕ್ರಮ ಯಾಕೆ ತೆಗೆದುಕೊಳ್ಳಬಾರದು ಎಂಬುದು ನಮ್ಮ ಒತ್ತಾಯ. ಸರ್ಕಾರ ಈಗಲಾದ್ರು ಎಚ್ಚೆತ್ತು ಹಾಲ್ ತಿಮ್ಮಲಾಪುರ ಗ್ರಾಮದ ಸಂಪರ್ಕ ಸೇತುವೆಯನ್ನ ಆದಷ್ಟು ಬೇಗ ನಿರ್ಮಾಣಮಾಡಬೇಕು.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.