ಆಂದ್ರಪ್ರದೇಶ… ಗಂಡಿಕೋಟೆ ಎಂಭ ಈ ಪ್ರಸಿದ್ದ ಪ್ರವಾಸಿ ಸ್ಥಳ, ನಮ್ಮ ಭಾರತದ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಜಮ್ಮಲ ಮಡುಗಿನಿಂದ 15 ಕಿಲೋಮಿಟರ್ ದೂರದಲ್ಲಿರುವ ಪೆನ್ನಾ ನದಿಯ ಬಲದಂಡೆಯಲ್ಲಿರುವ ಒಂದು ಗ್ರಾಮ ಮತ್ತು ಐತಿಹಾಸಿಕ ಕೋಟೆಯಾಗಿದೆ.
ಕಲ್ಯಾಣಿ ಚಾಲುಕ್ಯರು, ಪೆಮ್ಮಸಾನಿ ನಾಯಕರು ಮತ್ತು ಗೋಲ್ಕೊಂಡ ಸುಲ್ತಾನರಂತಹ ವಿವಿಧ ರಾಜವಂಶಗಳಿಗೆ ಈ ಕೋಟೆಯು ಅಧಿಕಾರದ ಕೇಂದ್ರವಾಗಿತ್ತು. ಗಂಡಿಕೋಟೆಯು 300 ವರ್ಷಗಳಿಗೂ ಹೆಚ್ಚು ಕಾಲ ಪೆಮ್ಮಸಾನಿ ನಾಯಕರ ರಾಜಧಾನಿಯಾಗಿತ್ತು.ನಂತರ ಕಲ್ಯಾಣಿ ಚಾಲುಕ್ಯ ಅರಸರ ಸಾಮಂತರಾದ ಕಾಕರಾಜರು ನಿರ್ಮಿಸಿದ ಹಿಂದಿನ ಮರಳಿನ ಕೋಟೆಯನ್ನು 101 ಗೋಪುರಗಳೊಂದಿಗೆ ಪೆಮ್ಮಸಾನಿ ರಾಮಲಿಂಗ ನಾಯುಡು ಗಂಡಿಕೋಟೆಯಲ್ಲಿ ನಿರ್ಮಿಸಿದರು.
ನಂತರದ ಮುಸ್ಲಿಂ ಆಳ್ವಿಕೆಯ ಸಮಯದಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ವಿವಿಧ ಸೇರ್ಪಡೆಗಳನ್ನು ಮಾಡಲಾಯಿತು, ಇಂತಾ ಐತಿಹಾಸಿಕ ಸ್ಥಳಕ್ಕೆ ನಮ್ಮ ಹಂಪಿ ಪ್ರವಾಸಿಮಾರ್ಗದರ್ಶಿಗಳು ಬೇಟಿನೀಡಿ ಅಧ್ಯಾಯನ ಕೈಗೊಂಡಿದ್ದಾರೆ. ಕಳೆದ ಒಂದು ವಾರದಿಂದ ಆಂದ್ರಪ್ರದೇಶದ ಕೆಲವು ಪ್ರಮುಖ ಪ್ರವಾಸಿ ತಾಣಕ್ಕೆ ಬೇಟಿನೀಡಿರುವ ಗೈಡ್ ಗಳು ಅಧ್ಯಾಯನ ಕೈಗೊಂಡಿದ್ದಾರೆ.
ವರದಿ.ಸುಬಾನಿ ಪಿಂಜಾರ.ವಿಜಯನಗರ.