ಬೆಂಗಳೂರು :ಇದು ಪತ್ರಿಕೋದ್ಯಮ-ಪತ್ರಿಕಾ ಧರ್ಮಕ್ಕೆ ಸಂದ ಜಯ ಎಂದರೂ ತಪ್ಪಾಗಲಿಕ್ಕಿಲ್ಲವೇನೋ..? ಪೊಲೀಸ್ ವ್ಗವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು “ಪತ್ರಿಕಾಸ್ವಾತಂತ್ರ್ಯ” ವನ್ನು ಹತ್ತಿಕ್ಕುವ ದುಸ್ಸಾಹಸ ನಡೆಸುತ್ತಿರುವ ಸರ್ಕಾರಕ್ಕೆ ಸರಿಯಾಗೇ ಶಾಸ್ತಿಯಾಗಿದೆ.ಖುದ್ದು ರಾಜ್ಯಪಾಲರೇ ಸರ್ಕಾರದ ಧೋರಣೆಗೆ ಗರಂ ಆಗಿದ್ದು ರಾಜ್ಯದ ಪ್ರತಿಷ್ಟಿತ ಸುದ್ದಿವಾಹಿನಿ ಬಿಟಿವಿ ಮಾಲೀಕರಾದ ಜಿಎಂ ಕುಮಾರ್ ವಿರುದ್ಧದ ಕೇಸ್ ನ್ನು ತತ್ ಕ್ಷಣಕ್ಕೆ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ.ರಾಜ್ಯಪಾಲರ ಆದೇಶದ ಪ್ರತಿ HAMPI MIRROR ಗೆ EXCLUSIVE ಆಗಿ ಲಭ್ಯವಾಗಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ, ಬಿಟಿವಿ ಮಾಲಿಕರು ಆಗಿರುವ ಹಿರಿಯ ಪತ್ರಕರ್ತ ಜಿ ಎಂ ಕುಮಾರ್ ಮೇಲಿನ ಕೇಸ್ ವಾಪಸ್ ಪಡೆಯುವಂತೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ತಮ್ಮ ವಿರುದ್ಧ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಮತ್ತು ಅವರ ಪುತ್ರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಒತ್ತಡದಿಂದ ಕೇಸ್ ದಾಖಲಿಸಲಾಗಿತ್ತು. ಬಸವೇಶ್ವರ ನಗರ ಠಾಣೆಯ ಇನ್ಸ್ಪೆಕ್ಟರ್ ಮೇಲೆ ಅಪ್ಪ-ಮಗ ಒತ್ತಡ ಹೇರಿ ನಿಸ್ಸಂಶಯವಾಗಿ ಬಿ ರಿಪೋರ್ಟ್ ಮಾಡಬಹುದಾಗಿದ್ದ ಪ್ರಕರಣದಲ್ಲಿ ಚಾರ್ಜ್ಶೀಟ್ ಹಾಕಿಸಿದ್ದರು ಎಂದು ಜಿ ಎಂ ಕುಮಾರ್ ದೂರು ನೀಡಿದ್ದರು.
ಈ ಸಂಬಂಧ, ಮಾನವ ಹಕ್ಕುಗಳ ಆಯೋಗದ ವರದಿ, ಇನ್ಸ್ಪೆಕ್ಟರ್ ಮಾತನಾಡಿದ್ದ ಆಡಿಯೋ ಸಾಕ್ಷಿ ಸೇರಿ ಹಲವು ಸಾಕ್ಷಿಗಳನ್ನು ಜಿಎಂ ಕುಮಾರ್ ಅವರು ರಾಜ್ಯಪಾಲ ರಿಗೆ ಒದಗಿಸಿದ್ದರು. ತಮ್ಮ ವಿರುದ್ಧದ ಸುಳ್ಳು ಮೊಕದ್ದಮೆ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದರು. ಇದೀಗ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿರುವ ರಾಜ್ಯಪಾಲರು, ಹಿರಿಯ ಪತ್ರಕರ್ತ ಜಿ ಎಂ ಕುಮಾರ್ ಮೇಲಿನ ಕೇಸ್ಗಳನ್ನು ಕಾನೂನು ರೀತ್ಯಾ ಹಿಂಪಡೆಯುವಂತೆ ಡಿಜಿ-ಐಜಿಪಿ ಮತ್ತು ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ. ಕರ್ನಾಟಕ ರಾಜ್ಯಪಾಲರ ಸಚಿವಾಲಯ 13-08-2024 ರಂದು ಹೊರಡಿಸಿರುವ ಆದೇಶ ಪತ್ರದ ಪ್ರತಿ HAMPI MIRROR ಗೆ ಲಭಿಸಿದೆ.