ಚಿಕ್ಕಮಗಳೂರು.. ಕಾಫಿ ತೋಟದಲ್ಲಿ ಮೆಣಸು ಹರಿಯುತ್ತಿದ್ದ ಮಹಿಳೆ ಆನೆ ಕಾಲಿಗೆ ಸಿಕ್ಕು ನರಳಿ ನರಳಿ ಸಾವನ್ನಪ್ಪಿದ ಧಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೆಳಗೂರು ಬಳಿಯ ಮನೋಜ್ ಕಾಫಿ ಎಷ್ಟೇಟ್ ನಲ್ಲಿ ಇಂದು ಬೆಳಗಿನ ಜಾವ ನಡೆದಿದೆ.ಸರೋಜ 38ವರ್ಷ ಸಾವಿಗೀಡಾದ ಮಹಿಳೆ ಆಗಿದ್ದು ತಮ್ಮ ಸಂಗಡಿಗರೊಂದಿಗೆ ಇಂದು ಬೆಳಗ್ಗೆ ತೋಟಕ್ಕೆ ಹೋದ ಮಹಿಳೆ, ಕಾಫಿ ತೋಟದಲ್ಲಿದ್ದ ಮೆಣಸು ಹರಿಯುವ ಕೆಲಸದಲ್ಲಿ ಮಗ್ನಳಾಗಿದ್ದ ಸಂದರ್ಭದಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿ ಏಕಾ ಎಕಿ ದಾಳಿ ಇಟ್ಟಿವೆ.
ಈ ಸಂದರ್ಭದಲ್ಲಿ ಜೊತೆಗೆ ಇದ್ದ ಎಲ್ಲಾ ಕಾರ್ಮಿಕರು ಕೂಗುತ್ತ, ಅರಚುತ್ತ ಅಲ್ಲಿಂದೆ ಓಡಿ ಹೋಗಿದ್ದಾರೆ, ಆದರೆ ಮೃತ ಮಹಿಳೆ ಆನೆಯ ಕಂಡು ಭಯ ಪಟ್ಟು ಸ್ಥಳದಲ್ಲೇ ಮೋರ್ಚೆ ಹೋಗಿ ನೆಲಕ್ಕೆ ಉರುಳಿದ್ದಾರೆ, ಈ ಸಂದರ್ಭದಲ್ಲಿ ದಾಳಿ ನಡೆಸಿದ ಕಾಡಾನೆ ಮಹಿಳೆಯನ್ನ ಮನಸೋ ಇಚ್ಚೆಯಿಂದ ತುಳಿದು ಸೊಂಡಿಲಿನಿಂದ ಎತ್ತಿ ಬಿಸಾಡಿದೆ, ಸ್ಥಳದಲ್ಲೇ ಇದ್ದ ಕಾರ್ಮಿಕರ ಕೂಗಾಟ ಚೀರಾಟ ಹೆಚ್ಚಾಗುತಿದ್ದಂತೆ ಮಹಿಳೆಯನ್ನ ಬಿಟ್ಟು ಸ್ಥಳದಿಂದ ಹೊರಟು ಹೋಗಿದೆ. ನಂತರ ಮಹಿಳೆಯನ್ನ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಆದರೂ ಮಹಿಳೆ ಮಾತ್ರ ಬದುಕಿ ಉಳಿಯಲಿಲ್ಲ.
ಇನ್ನು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಸೀಲನೆ ನಡೆಸಿರುವ ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಮೂಲತ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಡಂಬ್ರಳ್ಳಿ ತಾಂಡದ ಸರೋಜ ಎನ್ನುವ ಈ ಮೃತ ಮಹಿಳೆಯನ್ನ ಈ ಹಿಂದೆ ವಿವಾಹಮಾಡಿ ಹಾವೇರಿ ಜಿಲ್ಲೆ ಕಲ್ಲೇದೇವರು ಗ್ರಾಮಕ್ಕೆ ಕೊಟ್ಟಿದ್ದರು, ಕಲ್ಲೇದೇವರು ಗ್ರಾಮದಿಂದ ಕಾಫಿ ನಾಡಿಗೆ ಕೂಲಿ ಮಾಡಲು ತೆರಳಿದ ಮೃತ ಮಹಿಳೆಯ ಕುಟುಂಭ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಕನಸು ಕಂಡಿತ್ತು, ಆದರೆ ತಾ ಒಂದು ಬಗೆದರೆ ದೈವ ಒಂದು ಬಗೆದಂತೆ ಎನ್ನುವ ಹಾಗೆ ಆನೆ ಕಾಲಿಗೆ ಸಿಕ್ಕು ನರಳಿ ಸಾಯುವ ದುಸ್ಥಿತಿ ಮಹಿಳೆಗೆ ಬಂದೊದಗಿದ್ದು ಮಕ್ಕಳು ಬೀದಿಪಾಲಾಗುವ ಆನಂತಕದಲ್ಲಿವೆ.
ಇನ್ನು ಇತ್ತೀಚೆಗೆ ಇಂತಾ ದುರ್ಘಟನೆಗಳು ನಡೆಯಬಾರದು, ಕೂಲಿ ಕಾರ್ಮಿಕರು ವಲಸೆ ಹೋಗಬಾರದು ಎನ್ನುವ ಕಾರಣಕ್ಕಾಗಿಯೇ ನರೇಗ ಯೋಜನೆ ಅಡಿಯಲ್ಲಿ ಹಳ್ಳಿ,ಗ್ರಾಮದ ಜನಗಳಿಗೆ ಕೂಲಿ ಕೆಲಸ ಕೊಡುವ ಯೋಜನೆ ಪ್ರಾರಂಬಿಸಲಾಗಿತ್ತು. ಹೀಗಿದ್ದರು ಹಳ್ಳಿಗಳ ಜನಗಳು ವಲಸೆ ಹೋಗುವುದು ಇದುವರೆಗೆ ನಿಂತಿಲ್ಲ, ಬಡ ಮಕ್ಕಳು ಹೀಗೆ ಬೀದಿ ಪಾಲಾಗುವುದು ತಪ್ಪಿಲ್ಲ, ಸಂಭಂದ ಪಟ್ಟ ಯೋಜನೆಯ ಅಧಿಕಾರಿಗಳು ಈಗಲಾದ್ರು ಎಚ್ಚೆತ್ತು ಯೋಜನೆಯ ಲೋಪದೋಷಗಳನ್ನ ಸರಿಪಡಿಸುವ ಮೂಲಕ ಮೃತ ಕುಟುಂಭಕ್ಕೆ ಸೂಕ್ತ ಪರಿಹಾರ ನೀಡಬೇಕಿದೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.