ವಿಜಯನಗರ ( ಹೊಸಪೇಟೆ) ಜೋಳದರಾಶಿ ಗುಡ್ಡದಲ್ಲಿ ಅಗ್ನಿವಗಡ. ಅಪಾರ ಪ್ರಮಾಣದ ಪ್ರಾಣಿ ಹಾಗೂ ಸಸ್ಯ ಸಂಕುಲ ಬೆಂಕಿಗೆ ಆಹುತಿ. ಹೌದು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಹೊರ ವಲಯದಲ್ಲಿರುವ ಜೋಳದರಾಶಿ ಗುಡ್ಡಕ್ಕೆ ಇಂದು ಮಧ್ಯಾಹ್ನ ಬೆಂಕಿ ಬಿದ್ದಿದೆ. ಯಾರು ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ್ದು ಜೋಳದರಾಶಿ ಗುಡ್ಡದ ಒಂದು ಭಾಗದ ಕಾಡು ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದರು ಪ್ರಯೋಜನವಾಗುತ್ತಿಲ್ಲ.
ಆರಂಭದಲ್ಲಿ ಜೋಳದ ರಾಶಿ ಗುಡ್ಡದ ತುದಿಯಲ್ಲಿ ಕಾಣಿಸಿಕೊಂಡ ಬೆಂಕಿ ನಿಧಾನವಾಗಿ ಗುಡ್ಡದ ಅರ್ಧ ಭಾಗವನ್ನು ಆವರಿಸಿ ಸುಟ್ಟು ಹಾಕಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂದು ತಿಳಿದು ಬಂದಿಲ್ಲ. ಆದರೆ ಗುಡ್ಡಕ್ಕೆ ಹೋಗಿರುವ ಯಾರೋ ಕಿಟಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಅನುಮಾನಿಸಲಾಗಿದೆ. ಹೊಸಪೇಟೆ ನಗರದ ಒಂದು ಬದಿಯಲ್ಲಿ ಕಾಣಿಸಿಕೊಳ್ಳುವ ಗುಡ್ಡಕ್ಕೆ ಬೆಂಕಿ ಹಬ್ಬದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ತಡೆ ಹಿಡಿದಿದ್ದಾರೆ. ಆದರೆ ರಾಯರ ಕೆರೆ ಏರಿ ಭಾಗಕ್ಕೆ ಕಾಣುವ ಗುಡ್ಡ ಸಂಪೂರ್ಣ ಸುಟ್ಟು ಹೋಗಿದೆ. ಜೋಳದ ರಾಶಿಗುಡ್ಡ ಅಪಾರ ಪ್ರಮಾಣದ ಜೀವ ಸಂಕುಲವನ್ನು ಹೊಂದಿದೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ.
ನವಿಲು, ಕೌಜುಗ, ಇತರೆ ಪಕ್ಷಿಗಳು ಈ ಭಾಗದಲ್ಲಿ ಸಂತಾನೋತ್ಪತ್ತಿಗೆ ಬರುವುದು ಸರ್ವೇಸಾಮಾನ್ಯ, ಗುಡ್ಡಗಾಡು ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಕಲ್ಲು ಆಮೆ, ಮೊಲ, ಕರಡಿ, ಚಿರತೆ,ಮುಳ್ಳುಹಂದಿ, ವಾಸಿಸುವ ಪ್ರದೇಶ ಇದಾಗಿದೆ, ಇನ್ನುಳಿದಂತೆ ಸಣ್ಣಪುಟ್ಟ ಸರಿಸೃಪಗಳು ಅಕ್ಕಿ ಪಕ್ಷಗಳು ಸೇರದಂತೆ ಅಪಾರ ಪ್ರಮಾಣದ ಜೀವ ಸಂಕುಲವನ್ನು ತನ್ನ ಒಡಲಾಗಿ ಇಟ್ಟುಕೊಂಡಿದೆ ಜೋಳದ ರಾಶಿಗುಡ್ಡ, ಇತ್ತೀಚಿಗೆ ಈ ಗುಡ್ಡದಲ್ಲಿ ಸಸಿಗಳನ್ನು ಕೂಡ ನಾಟಿ ಮಾಡುವ ಮೂಲಕ ಅರಣ್ಯವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ರೂಪಿಸಲಾಗಿತ್ತು,
ಹೀಗಿರುವಾಗ ಯಾರೋ ಕಿಡಿಗೇಡಿಗಳು ಮಾಡಿದ ಕೆಲಸಕ್ಕೆ ಎಲ್ಲ ಜೀವ ಸಂಕುಲ ಸುಟ್ಟು ನಾಶವಾಗಿದೆ, ಇತ್ತೀಚಿಗೆ ಈ ಜೋಳದ ರಾಶಿ ಗುಡ್ಡವನ್ನ ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಲು ಅಭಿವೃದ್ಧಿಪಡಿಸಲಾಗುತ್ತಿದೆ , ಈ ಕಾರಣದಿಂದಲೇ ಜೋಳದರಾಶಿ ಗುಡ್ಡದ ತುದಿಯಲ್ಲಿ ದ್ವಜಸ್ತಂಬವನ್ನ ಸ್ಥಾಪನೆ ಮಾಡಿ, ಶ್ರೀ ಕೃಷ್ಣದೇವರಾಯರ ಪುತ್ತಳಿ ಸ್ಥಾಪನೆಗೆ ಕೂಡ ಕಾಮಗಾರಿ ನಡೆದಿದೆ. ಇಂಥ ಅಪರೂಪದ ಸ್ಥಳ ಇದೀಗ ಬೆಂಕಿಗೆ ಆಹುತಿಯಾಗಿರುವುದು ದುರಂತದ ವಿಚಾರವಾಗಿದೆ.
ವರದಿ.. ಸುಭಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.