You are currently viewing ⚠️🚫ತುಂಗಭದ್ರಾ ಅಣೆಕಟ್ಟಿನಿಂದ ಎಚ್ಚರಿಕೆ ಸಂದೇಶ 🚫⚠️

⚠️🚫ತುಂಗಭದ್ರಾ ಅಣೆಕಟ್ಟಿನಿಂದ ಎಚ್ಚರಿಕೆ ಸಂದೇಶ 🚫⚠️

  • Post category:Live / Top news

ವಿಜಯನಗರ..(ಹೊಸಪೇಟೆ )1633 ಅಡಿ ಗರಿಷ್ಟ ಮಟ್ಟದ ತುಂಗಭದ್ರಾ ಜಲಾಶಯದಯದಲ್ಲಿ ಇಂದು (20/07/2024) *1621.32 ಅಡಿಗೆ ತಲುಪಿದೆ, ಅದೇರೀತಿ 105.78 ಟಿ. ಎಂ. ಸಿ ನೀರು ಸಂಗ್ರಹಣೆ ಸಾಮರ್ಥ್ಯದ ಜಲಾಶಯದಲ್ಲಿ ಇದೀಗ 65.110 ಟಿಎಂಸಿಗೆ ಬಂದು ತಲುಪಿದೆ,

ಅದಲ್ಲದೆ ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರೆದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಬಾರಿ ಪ್ರಮಾಣದ ಒಳ ಹರಿವು ಹೆಚ್ಚಾಗಿದೆ. ಮತ್ತೊಂದೆಡೆ 1,07,198 ಕ್ಯೂಸೆಕ್‌ ನೀರು ತುಂಗಾ ಅಣೆಕಟ್ಟಿನಿಂದ ಬಿಡುಗಡೆಯಾದ ಕಾರಣ ತುಂಗಭದ್ರಾ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಬಹುದು,

ಹಾಗಾಗಿ ಜಲಾಶಯದ ನೀರಿನ ಮಟ್ಟವನ್ನ ಕಾಯ್ದಿಟ್ಟುಕೊಂಡ ತುಂಗಭದ್ರಾ ಬೋರ್ಡ್, ಒಳ ಹರಿವಿನ ಪ್ರಮಾಣದ ನೀರಿನಷ್ಟೇ ಹೊರ ಹರಿವನ್ನ ಕೂಡ ತುಂಗಭದ್ರಾ ನದಿಗೆ ಬಿಡುವ ಸಾಧ್ಯತೆ ಇದೆ.

ಈ ಕಾರಣ ದಿಂದ ತುಂಗಭದ್ರಾ ಜಲಾಶಯದ ಕೆಳ ಬಾಗದ ನದಿಯ ಅಕ್ಕ ಪಕ್ಕದ ಹಳ್ಳಿಗಳಲ್ಲಿರುವ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಮಾಹಿತಿ ರವಾನಿಸಿಸಿರುವ ತುಂಗಭದ್ರಾ ಆಡಳಿತ ಮಂಡಳಿ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವಂತೆ ಮುನ್ಸೂಚನೆ ನೀಡಿದೆ.ನದಿ ಪಾತ್ರದಲ್ಲಿರುವ ವಿಶ್ವ ವಿಖ್ಯಾತ ಹಂಪಿ, ಕಂಪ್ಲಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ತುಂಗಭದ್ರಾ ಪ್ರವಾಹ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಜನ ಸಾಮಾನ್ಯರು ಎಚ್ಚರಿಕೆ ಇಂದ ಇರಬೇಕಾಗಿದೆ.