You are currently viewing ಸಕಾಲ ಮಿತ್ರರ ನೇಮಕ: ಡಿಸಿ ಕಚೇರಿ ಸಂಪರ್ಕಿಸಿ

ಸಕಾಲ ಮಿತ್ರರ ನೇಮಕ: ಡಿಸಿ ಕಚೇರಿ ಸಂಪರ್ಕಿಸಿ


ಬಳ್ಳಾರಿ…ಜಿಲ್ಲಾ ವ್ಯಾಪ್ತಿಯ ನಾಗರಿಕರಲ್ಲಿ ಸಕಾಲ ಸೇವೆಗಳ ಕುರಿತು  ಅರಿವು ಮೂಡಿಸುವ ಸಲುವಾಗಿ ಯೋಜನೆ ಕುರಿತು ಆಸಕ್ತಿ ಇರುವ ವ್ಯಕ್ತಿಗಳನ್ನು ಶೈಕ್ಷಣಿಕ ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆ (ಎನ್.ಜಿ.ಒ) ಮುಖಾಂತರ ಸಕಾಲ ಮಿತ್ರರನ್ನು ನೇಮಕ ಮಾಡಿಕೊಳ್ಳುವಂತೆ ಸಕಾಲ ಮಿಷನ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಪರ ಮಿಷನ್ ನಿರ್ದೇಶಕರು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸಕಾಲ ಮಿತ್ರ ಯೋಜನೆಗೆ ಆಸಕ್ತಿಯುಳ್ಳ ಯಾವುದೇ ಶೈಕ್ಷಣಿಕ ಸಂಸ್ಥೆ ಅಥವಾ ಸರಕಾರೇತರ ಸಂಸ್ಥೆ(ಎನ್‍ಜಿಒಗಳು)  ಜ.24 ರೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಂಪರ್ಕಿಸುವುದು. ಈ ಯೋಜನೆ ಅಡಿ ಯಾವುದೇ ರೀತಿಯ ಆರ್ಥಿಕ ಬಾದ್ಯತೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಕಾಲ ಸಮಾಲೋಚಕರಾದ ಸೈಯದ್ ಮೊಹಮ್ಮದ್ ಹುಸೈನಿ ಮೊ.9945732165 ಅಥವಾ ಜಿಲ್ಲಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
-*-