ವಿಜಯನಗರ..ದೇಶದ ರಕ್ಷಣೆಗೆ ಎದೆ ಕೊಟ್ಟು ನಿಲ್ಲುವುದು ಗಡಿಯಲ್ಲಿರುವ ನಮ್ಮ ಸೈನಿಕರು. ಇಂತಾ ಗಡಿ ರಕ್ಷಣೆಗೆ ಸೈನಿಕರಾಗಲು ಸಾಕಷ್ಟು ಬಡ ವಿಧ್ಯಾರ್ಥಿಗಳು ಹಗಲು ರಾತ್ರಿ ಕಷ್ಟಪಟ್ಟು ಸೇನೆ ಸೇರುತ್ತಾರೆ, ಹೀಗೆ ಕಷ್ಟಪಟ್ಟ ಅದೆಷ್ಟೊ ವಿಧ್ಯಾರ್ಥಿಗಳಿಗೆ ಸೇನೆಯಲ್ಲಿ ಕೆಲಸ ಸಿಗದೆ ನಿರಾಸೆ ಅನುಭವಿಸಿದ್ದನ್ನ ಕಂಡಿದ್ದೇವೆ, ಆದರೆ ಇಲ್ಲಿ ಕೆಲವರ ಗುಂಪೊಂದು ಪತ್ತೆಯಾಗಿದೆ,
ಒಂದು ಸರ್ಕಾರಿ ನೌಕರಿ ಪಡೆಯಬೇಕಾದರೆ ಎಷ್ಟೆಲ್ಲ ಕಷ್ಟ ಅನುಭವಿಸಬೇಕು ಎನ್ನುವುದು ಅನುಭವಿಸದವರಿಗೆ ಮಾತ್ರ ಗೊತ್ತು. ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶ್ರಮ ಪಟ್ಟು ಆಯ್ಕೆಯಾದ ಕೆಲವರು. ಪೊಲೀಸ್ ವೆರಿಪಿಕೇಷನಲ್ಲಿ ಸಿಕ್ಕ ಕೆಲಸವನ್ನ ಕಳೆದುಕೊಂಡ ಅದೆಷ್ಟೊ ಉದಾಹರಣೆಗಳಿವೆ. ಯಾಕೆಂದ್ರೆ ಯಾವುದೇ ಸುಳ್ಳು ದಾಖಲೆಗಳನ್ನ ಕೊಟ್ಟು ಸರ್ಕಾರಿ ಸೇವೆಗೆ ಸೇರಲು ಪೊಲೀಸ್ ಇಲಾಖೆ ಅವಕಾಶ ಕೊಡುವುದಿಲ್ಲ. ಒಂದು ವೇಳೆ ಪೊಲೀಸ್ ಇಲಾಖೆಯ ಕೆಲವರು ಲಂಚದ ಆಸೆಗೆ ಬಿದ್ದು ಇಂತಾ ಕೃತ್ಯಕ್ಕೆ ಸಹಕರಿಸಿದರೆ ಎಂತಾ ತಪ್ಪುಗಳು ನಡೆದುಬಿಡುತ್ತವೆ ಎಂದು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ನೋಡಿ. ಇಲ್ಲಿ ನಡೆದಿರುವ ತಪ್ಪು ಕೂಡ ಅಂತಾದ್ದೆ. ಪಕ್ಕದ ಮಹಾರಾಷ್ಟ್ರದ ಮೂಲದವರು ನಮ್ಮ ಕರ್ನಾಟಕದ ನಿವಾಸಿಗಳೆಂದು ನಕಲಿ ದಾಖಲೆ ಸೃಷ್ಟಿಸಿ, ಸೇನೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಕೆಲಸ ಗಿಟ್ಟಿಸಿಕೊಳ್ಳುವುದಷ್ಟೇ ಅಲ್ಲ ಸೇನೆಯಲ್ಲಿ ಸೇವೆನ್ನ ಕೂಡ ಸಲ್ಲಿಸುತಿದ್ದಾರೆ. ಆದರೆ ವಂಚಕರ ಕೃತ್ಯವನ್ನ ನಮ್ಮ ವಿಜಯನಗರ ಜಿಲ್ಲಾ ಪೊಲೀಸರು ಬೇದಿಸಿದ್ದಾರೆ.ಸೇನೆಗೆ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳನ್ನ ಪರಿಸೀಲನೆ ನಡೆಸುವಂತೆ ಹಿರೇಹಡಗಲಿ ಪೊಲೀಸ್ ಠಾಣೆಗೆ ಸೇನೆ ದಾಖಲೆಗಳನ್ನ ರವಾನಿಸುತ್ತದೆ. ಆಗ ಪ್ರಾರಂಭವಾದ ತನಿಖೆ ಇಡೀ ಜಾಲವನ್ನ ಪತ್ತೆ ಹಚ್ಚಿ ಒಂಭತ್ತು ಜನರ ಕೈಗೆ ಕೊಳ ತೊಡಿಸಿದ್ದಾರೆ ವಿಜಯನಗರ ಪೊಲೀಸರು. ವಿಪರ್ಯಾಸವೆಂದರೆ ಇದರಲ್ಲಿ ಪೊಲೀಸ್ ಇಲಾಖೆಯವರು ಶಾಮೀಲಾಗಿದ್ದಾರೆ. ಈ ಸಂಭಂದ ಇಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಾ.ಅರುಣ್ .ಕೆ ಪತ್ರಿಕಾಘೊಷ್ಠಿಯ ಮೂಲಕ ಈ ವಿಷಯವನ್ನ ಬಹಿರಂಗಗೊಳಿಸಿದ್ದಾರೆ.